ಕಬ್ಬು

ಕಬ್ಬು ವಾರ್ಷಿಕ ಬೆಳೆಯಾಗಿದ್ದು ನಮ್ಮಕರ್ನಾಟಕದಲ್ಲಿ ಮಂಡ್ಯ, ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿ ಅತಿ ಹೆಚ್ಚಾಗಿ ಬೆಳೆಯಲಾಗುವುದು. ಕಬ್ಬು ನೀರು ಬಯಸುವ ಬೆಳೆ ಮತ್ತು ಈ ಪ್ರದೇಶಗಳಲ್ಲಿ ಉತ್ತಮ ನೀರಾವರಿ ಇರುವ ಕಾರಣ ರೈತರು ಹೆಚ್ಚು ಕಬ್ಬು ಬೆಳೆಯುತ್ತಾರೆ. ಕಬ್ಬಿನ ಅದರದೇ ಆದ ಸಮಸ್ಯೆಗಳಿವೆ ಅವು ಪೋಷಕಾಂಶಗಳ ಕೊರತೆಯಿಂದ, ರೋಗಗಳು ಮತ್ತು ಕೀಟಗಳಿಂದಾಗಿವೆ.

1. ಕಬ್ಬಿನ ಬೆಳೆಯಲ್ಲಿ ಉತ್ತಮ ಇಳುವರಿ ಬಾರದಿರಲು ಕಾರಣಗಳೇನು ?

ಅನೇಕ ರೈತರು ಉತ್ತಮ ಇಳುವರಿ ಪಡೆಯುವುದರಲ್ಲಿ ವಿಫಲರಾಗಿದ್ದಾರೆ ಅದಕ್ಕೆ ಹಲವು ಕಾರಣಗಳಿವೆ.

  1. ಕೊಟ್ಟಿಗೆ ಗೊಬ್ಬರವನ್ನು ಬೇಕಾದ ಪ್ರಮಾಣದಲ್ಲಿ ನೀಡದಿರುವುದು.

  2. ರಾಸಾಯನಿಕಗಳು ಉಪಯೋಗಿಸುತ್ತಿದ್ದಲ್ಲಿ ಸಮಯಕ್ಕೆ ತಕ್ಕಂತೆ ನೀಡದಿರುವುದು.

  3. ಸೂಕ್ತ ಮಣ್ಣಿ ಆಯ್ಕೆ ಮಾಡದಿರುವುದು. (ರಸ ಸಾರ(pH) ಹೆಚ್ಚಿದ್ದಲ್ಲಿ ಉತ್ತಮ ಇಳುವರಿ ಸಾಧ್ಯವಿಲ್ಲ).

  4. ಹದವಾಗಿ ನೀರು ಕೊಡದೆ ಅತಿ ಹೆಚ್ಚು ಅಥವಾ ಅತಿ ಕಡಿಮೆ ನೀರು ಕೊಡುವುದು.

  5. ಸಮಯಕ್ಕೆ ಸರಿಯಾಗಿ ಕಳೆ ತೆಗೆಯದಿರುವುದು.

  6. ರೋಗ ಮತ್ತು ಕೀಟ ನಿಯಂತ್ರಣ ಮಾಡದಿರುವುದು.

  7. ಅತಿಯಾದ ರಾಸಾಯನಿಕಗಳ ಉಪಯೋಗ.

2. ಕಬ್ಬಿನ ಬೆಳೆಯಲ್ಲಿ ಉತ್ತಮ ಇಳುವರಿ ತೆಗೆಯಲು ಏನು ಮಾಡ ಬೇಕು ?

ರೈತರು ಉತ್ತಮ ಇಳುವರಿ ಪಡೆಯಲು ಹಲವು ವಿಧಾನಗಳನ್ನು ಅಳವಡಿಸಿಕೊಳ್ಳ ಬೇಕು.

  1. ಕೊಟ್ಟಿಗೆ ಗೊಬ್ಬರವನ್ನು ಹೆಚ್ಚು ಹೆಚ್ಚು ಬಳಸುವುದು.

  2. ರಾಸಾಯನಿಕಗಳು ಉಪಯೋಗಿಸುತ್ತಿದ್ದಲ್ಲಿ ಸಮಯಕ್ಕೆ ತಕ್ಕಂತೆ ನೀಡವುದು.

  3. ರಸ ಸಾರ pH - 6 ರಿಂದ 7.5 ಇರುವ ಭೂಮಿಯನ್ನು ಆಯ್ಕೆ ಮಾಡಿಕೊಳ್ಳುವುದು.

  4. ಹದವಾಗಿ ನೀರು ಕೊಡುವುದು.

  5. ಹನಿ ನೀರಾವರಿಯನ್ನು ಉಪಯೋಗಿಸಿ ಕೊಳ್ಳುವುದು.

  6. ಕಾಲುವೆಗಳಲ್ಲಿ ನೀರು ಹರಿಸುವುದಾದರೆ, ಕಾಲುವೆಗಳ ಉದ್ದ ಕಡಿಮೆ ಇರುವಂತೆ ನೋಡಿಕೊಳ್ಳುವುದು.

  7. ಸಮಯಕ್ಕೆ ಸರಿಯಾಗಿ ಕಳೆ ತೆಗೆಯುವುದು.

  8. ರೋಗ ಮತ್ತು ಕೀಟ ನಿಯಂತ್ರಣ ಮಾಡವುದು.

  9. ಅತಿಯಾದ ರಾಸಾಯನಿಕಗಳ ಉಪಯೋಗ ಬೇಡ.

  10. ಸಾಲಿನಿಂದ ಸಾಲಿಗೆ, ಬೀಜ ದಿಂದ ಬೀಜಕ್ಕೆ ಹೆಚ್ಚಿನ ಅಂತರ ಇಟ್ಟು ಹಲವು ಅಂತರ ಬೆಳೆಗಳು ಮಾಡುವುದು.

3. ಕಬ್ಬಿನ ಬೆಳೆಯಲ್ಲಿ ಗೊಣ್ಣೆ ಹುಳ ಅಥವಾ ಬೇರು ಹುಳದ ನಿರ್ವಹಣೆ ಮಾಡುವುದು ಹೇಗೆ ?

ಗೊಣ್ಣೆ ಹುಳ ಸಾವಯವ ತ್ಯಾಜ್ಯವನ್ನು ತಿಂದು ಜೀವಿಸುವ ಒಂದು ಕೀಟ. ಇದರ ಉಪಟಳ ಪ್ರತಿ ವರ್ಷ ಮೇ. ತಿಂಗಳಿನಿಂದ ಅಕ್ಟೋಬರ್ ತಿಂಗಳಿನವರೆವಿಗೆ ಇರುತ್ತದೆ. ಇದಕ್ಕೆ ಮುಖ್ಯಕಾರಣ ರೈತರು ಹೆಚ್ಚು ಸಾವಯವ ತ್ಯಾಜ್ಯ ಅಥವಾ ಕೊಟ್ಟಿಗೆ ಗೊಬ್ಬರ ಬಳಸದಿರುವುದು.

ಗೊಣ್ಣೆ ಹುಳ ನಿರ್ವಹಿಸಲು SOIL CLEAN ದ್ರಾವಣವನ್ನು 5 ಮಿ.ಲಿ. 1 ಲೀ. ನೀರಿಗೆ ಮಿಶ್ರಣ ಮಾಡಿ ಮಣ್ಣಿಗೆ ನೀಡುವುದು ಮತ್ತು ಇದೇ ವಿಧಾನವನ್ನು ಒಂದು ವಾರದ ನಂತರ ಎರಡನೇ ಸಲ ಬಳಸುವುದು.

4. ಕಬ್ಬಿನ ಬೆಳೆಯಲ್ಲಿ ಉಣ್ಣೆ ರೋಗದ ನಿರ್ವಹಣೆ ಮಾಡುವುದು ಹೇಗೆ ?

ಉಣ್ಣೆ ಅಥವಾ ಬಿಳಿ ಉಣ್ಣೆ ಅಂದರೆ ಕಬ್ಬಿನ ಎಲೆಯ ಮೇಲೆ ಮೂಡುವ ಹತ್ತಿ ತರಹದ ಶಿಲೀಂದ್ರವಾಗಿದೆ. ಇದರಿಂದ ದ್ಯುತಿಸಂಶ್ಲೇಷಣ ಕ್ರೀಯೆಗೆ ಅಡಚಣೆ ಉಂಟುಮಾಡಿ, ಉತ್ತಮ ಇಳುವರಿ ಬರುವುದಿಲ್ಲ.

ಈ ಸಮಸ್ಯೆಗೆ ಮುಖ್ಯಕಾರಣ ಅತಿಯಾದ ಸಾರಜನಕದ(UREA) ಬಳಕೆ.

ನಿರ್ವಹಣೆ:

1. SOIL STAR ADVACNED ದ್ರಾವಣವನ್ನು ಒಂದು ಎಕರೆಗೆ 10 ಲೀ. ಬಳಸುವುದು.

2. AVAF-18 ದ್ರಾವಣವನ್ನು ಪ್ರತಿ ಲೀಟರ್ ನೀರಿಗೆ 3 ಮಿ.ಲಿ. ಪ್ರಕಾರ ಮಿಶ್ರಣ ಮಾಡಿ ಸಿಂಪಡಿಸುವುದು.

5. ಕಬ್ಬಿನ ಬೆಳೆಯಲ್ಲಿ ಸುಳಿ ಕೊರಕವನ್ನು ನಿಯಂತ್ರಿಸುವುದು ಹೇಗೆ ?

ಸಾಮಾನ್ಯವಾಗಿ ವಾತಾವರಣದಲ್ಲಿ ತಾಪಮಾನ ಹೆಚ್ಚಿದಾಗ ಸುಳಿ ಕೊರಕದ ಕಾಟ ಹೆಚ್ಚುತ್ತದೆ. ಈ ಸಮಸ್ಯೆಯನ್ನು ಹಲವು ತರಹ ಬಗೆ ಹರಿಸಬಹುದು.

  1. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಅಂತರ ಬೆಳೆಯಾಗಿ ಬೆಳೆಯುವುದು. ಅಥವಾ

  2. SOIL CLEAN ದ್ರಾವಣವನ್ನು 5 ಮಿ.ಲಿ ಒಂದು ಲೀ. ನೀರಿಗೆ ಮಿಶ್ರಣ ಮಾಡಿ ಕಬ್ಬು ನಾಟಿ ಮಾಡಿರುವ ಬೋದಿಗೆ ನೀಡುವುದು, ಇದರಿಂದ ಗೊಣ್ಣೆ ಹುಳದ ನಿವಾರಣೆಯೂ ಆಗುವುದು.

6. ಕಬ್ಬಿನ ಬೆಳೆಯಲ್ಲಿ ಎಲೆ ಕಿಲುಬು ರೋಗ

ಕಬ್ಬಿನಲ್ಲಿ ಎಲೆ ಕಿಲುಬು ರೋಗವಲ್ಲ ಆದರೆ ಅದು ರುಜಿನ, ಇದು ಪೋಷಕಗಳ ಕೊರತೆಯಿಂದ ಉಂಟಾಗುವು ಸಮಸ್ಯೆ. ಇದು ಇಳುವರಿ ಕಡಿಮೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದಕ್ಕೆ ಪರಿಹಾರ ಕೆಳಗಿಂತಿದೆ.

  1. ಬೆಳೆಗೆ ರಂಜಕ, ಬೋರಾನ್ ನೀಡುವುದು.

  2. SOIL STAR Advanced ದ್ರಾವಣವನ್ನು ಎಕರೆಗೆ 10 ಲೀ. ಬಳಸುವುದು.