ಶುಂಠಿ

ಶುಂಠಿ ಮಲೆನಾಡಿನಲ್ಲಿ ಮತ್ತು ಕರಾವಳಿಯಲ್ಲಿ ಅತಿ ಹೆಚ್ಚಿಗೆ ಬೆಳೆಯುವ ವಾಣಿಜ್ಯ ಬೆಳೆಯಾಗಿದೆ. ಇದು ವಿಶೇಷವಾಗಿ ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಅತಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಮದ್ಯೆ ಬಯಲು ಸೀಮೆ ಪ್ರದೇಶಗಳಲ್ಲೂ ರೈತರು ಬೆಳೆಯಲಾರಂಬಿಸಿದ್ದಾರೆ. ಈ ಬೆಳೆ ಮಾಡಿ ಉತ್ತಮ ಇಳುವರಿಯನ್ನು ತೆಗೆಯಲು ತಂಪಾದ ಹವಾಮಾನವಿದ್ದು, ಪ್ರಖರ ಸೂರ್ಯನ ಕಿರಣಗಳಿಲ್ಲದ ವಾತಾವರಣ ಮುಖ್ಯ. ಈ ಬೆಳೆಯಲ್ಲಿ ರೈತರಿಗೆ ಸಾಮಾನ್ಯವಾಗಿ ಬರುವ ಸಂದೇಹಗಳನ್ನು ಪ್ರಶ್ನೆ ಮತ್ತು ಉತ್ತರ ರೂಪದಲ್ಲಿ ನೀಡಲಾಗಿದೆ.

  1. ಶುಂಠಿ ಬೀಜ ಬಿತ್ತಲು ಉತ್ತಮವಾದ ಸಮಯ ಯಾವುದು ?

ಹಾಸನ, ಚಿಕ್ಕಮಗಳೂರು, ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ಶುಂಠಿ ಬಿತ್ತಲು ಉತ್ತಮ ಸಮಯ ಫೆಬ್ರವರಿ ತಿಂಗಳಿನಿಂದ ಮೇ ತಿಂಗಳ ಅಂತ್ಯದ ವರೆವಿಗೆ ಉತ್ತಮ.

ಇತರೆ ಪ್ರದೇಶಗಳಲ್ಲಿ ಯಾವುದೇ ಸಮಯದಲ್ಲಿ, ಉತ್ತಮ ಬೀಜದ ಲಭ್ಯತೆಯ ಆಧಾರದ ಮೇಲೆ ಬೆಳೆಯ ಬಹುದಾಗಿದೆ.

2. ಶುಂಠಿ ಬೆಳೆಯಲು ಯಾವ ಭೂಮಿ ಅಥವಾ ಮಣ್ಣು ಸೂಕ್ತ ?

ಶುಂಠಿ ಬೆಳೆಯಲು ನೀರು ಸುಲಭವಾಗಿ ಬಸಿದು ಹೋಗುವ, ಕೆಂಪು ಮರಳು ಮಿಶ್ರಿತ ಮಣ್ಣು ಉತ್ತಮ.

3. ಶುಂಠಿ ಬೆಳೆಗೆ ಭೂಮಿ ತಯಾರಿ ಹೇಗೆ ಮಾಡ ಬೇಕು ?

ಶುಂಠಿ ಭೂಮಿ ತಯಾರಿ ಪ್ರದೇಶದಿಂದ ಪ್ರದೇಶಕ್ಕೆ ಅಲ್ಲಿನ ಮಳೆಯ ಪ್ರಮಾಣದ ಆಧಾರದ ಮೇಲೆ ಹಲವು ವ್ಯತ್ಯಾಸಗಳನ್ನು ಮಾಡಿಕೊಳ್ಳ ಬೇಕಿರುತ್ತದೆ.

  1. ಭೂಮಿಯನ್ನು ಹಲವು ಸಾರಿ ಉಳುಮೆ ಮಾಡಬೇಕು.

  2. ಉತ್ತಮ ಗುಣಮಟ್ಟದ ಕಾಂಪೋಸ್ಟ ಆದ ಕೊಟ್ಟಿಗೆ ಗೊಬ್ಬರವನ್ನು ತುಸು ಹೆಚ್ಚಿನ ಪ್ರಮಾಣದಲ್ಲಿ ಬಳಸ ಬೇಕು.

  3. ಹೆಚ್ಚಿನ ಮಳೆ ಪ್ರದೇಶಗಳಲ್ಲಿ ನೀರು ನಿಲ್ಲದೆ ಹರಿದು ಹೋಗಲು ಆಳದ ಬಸಿ ಕಾಲುವೆಗಳನ್ನು ನಿರ್ಮಿಸಬೇಕು.

  4. ಸಾಧಾರಣ ಮಳೆ ಪ್ರದೇಶಗಳಲ್ಲಿ ನೀರು ನಿಲ್ಲದ ಹಾಗೆ ಭೂಮಿ ತಯಾರಿ ಮಾಡಿ, ಬೋದುಗಳ ನಿರ್ಮಾಣ ಮಾಡಿಕೊಳ್ಳುವುದು ಉತ್ತಮ.

  5. ಶುಂಠಿ ನೆರಳು ಅಥವಾ ತಂಪಾದ ಪರಿಸರವನ್ನು ಬಯಸುವ ಬೆಳೆ ಆದುದರಿಂದ ಬಯಲು ಸೀಮೆ ಪ್ರದೇಶಗಳಲ್ಲಿ ತೆಂಗಿನ ಅಥವಾ ಅಡಿಕೆ ತೋಟಗಳಲ್ಲಿ ಅಂತರ ಬೆಳೆಯಾಗಿ ಮಾಡುವುದು ಸೂಕ್ತ.

  6. ನೆರಳಿಲ್ಲದ ಕೆಲ ರೈತರು ತೊಗರಿ, ಅರಳೆ (ಔಡಲ)ಯನ್ನು ಶುಂಠಿಯನ್ನು ಅಂತರ ಬೆಳೆಯಾಗಿ ಬೆಳೆಯುತ್ತಾರೆ.

4. ಒಂದು ಎಕರೆ ಭೂಮಿಗೆ ಎಷ್ಟು ಬೀಜ ಬೇಕಿರುತ್ತದೆ ?

ಇದು ರೈತರು ಬೀಜ ದಿಂದ ಬೀಜಕ್ಕೆ ಪಾಲಿಸುವ ಅಂತರದ ಮೇಲೆ ಅವಲಂಭಿತವಾಗಿರುತ್ತದೆ. ಸಾಮಾನ್ಯವಾಗಿ 20 ಮೂಟೆ (1 ಮೂಟೆ ಅಂದರೆ 60 ಕೆ.ಜಿ) ಬೀಜವನ್ನು ಒಂದು ಎಕರೆ ಪ್ರದೇಶಕ್ಕೆ ಬಳಸುತ್ತಾರೆ.

5. ಸುಮಾರು ಒಂದು ಎಕರೆಯಲ್ಲಿ ಎಷ್ಟು ಇಳುವರಿಯನ್ನು ನಿರೀಕ್ಷಿಸಬಹುದು ?

ಬೆಳೆ ಇಳುವರಿಯ ನಿರೀಕ್ಷೆ ಹಲವು ನಿಯತಾಂಕಗಳ ಮೇಲೆ ಅವಲಂಭಿಸಿದೆ. ಕೆಲವು ನಿಯತಾಂಕಗಳನ್ನು ಇಲ್ಲಿ ನೀಡಿದ್ದೇವೆ.

  1. ಬೆಳೆ ಮಾಡುವು ಪ್ರದೇಶ ಮತ್ತು ವಾತಾವರಣ. ಉದಾಹರಣೆಗೆ ಹಾಸನ, ಕೊಡಗು ಮತ್ತು ಕರಾವಳಿ ಜಿಲ್ಲೆಗಳು ಉತ್ತಮ ಇಳುವರಿಗೆ ಬಹಳ ಸೂಕ್ತ.

  2. ಮಣ್ಣಿನ ತಯಾರಿ.

  3. ಬಳಸುವ ಗುಣಮಟ್ಟದ ಗೊಬ್ಬರಗಳು ಮತ್ತು ಅವುಗಳ ಪ್ರಮಾಣ, ವಿಶೇಷವಾಗಿ ಕೊಟ್ಟಿಗೆ ಗೊಬ್ಬರ.

  4. ಬಳಸುವ ಗುಣಮಟ್ಟದ ಬೀಜ. (ಉತ್ತಮ ತಳಿ ಮತ್ತು ರೋಗ ರಹಿತ ಬೀಜಗಳು)

  5. ರೋಗ ಮತ್ತು ಕೀಟ ನಿರ್ವಹಣೆ.

ಸಾಮಾನ್ಯವಾಗಿ ಒಂದು ಎಕರೆ ಪ್ರದೇಶದಲ್ಲಿ 400 ರಿಂದ 600 ಮೂಟೆ (60 ಕೆ.ಜಿ) ನಿರೀಕ್ಷಿಸಬಹುದು. ಕೆಲವೊಮ್ಮೆ ಹೆಚ್ಚು ಇಳುವರಿ ನಮೂದಿಸಿರುವ ಉದಾಹರಣೆಗಳೂ ಇವೆ.

6. ಶುಂಠಿಯಲ್ಲಿ ಕೊಳೆ ರೋಗ ಅಂದರೇನು ? ಅದಕ್ಕೆ ಕಾರಣಗಳೇನು ? ನಿರ್ವಹಣೆ ಹೇಗೆ ?

ಶುಂಠಿ ಬೆಳೆಯಲ್ಲಿ ಕೊಳೆ ರೋಗ ರೈತರ ನಿದ್ದೆ ಕೆಡಿಸುವ ರೋಗವಾಗಿದೆ. ಇದನ್ನು RHIZOME ROT ಎಂದು ಕರೆಯುವುದುಂಟು. ಕೊಳೆ ರೋಗವೇ ಆದರೂ ಇದಲ್ಲಿ ಹಲವು ತರಹದ ಕೊಳೆ ರೋಗಗಳಿವೆ. ರೈತರು ಆಡು ಭಾಷಯಲ್ಲಿ ಬಾಡು ಕೊಳೆ, ಕೆಂಪು ಕೊಳೆ, ಕರಿ ಕಡ್ಡಿ ಹೀಗೆ ಅನೇಕ ಹೆಸರುಗಳಲ್ಲಿ ಕರೆಯುವುದುಂಟ್ಟು. ಈ ಸೋಂಕನ್ನು ಸರಿಯಾಗಿ ನಿರ್ವಹಣೆ ಮಾಡದಲ್ಲಿ ಪೂರ್ಣ ಬೆಳೆ ನಾಶ ಸಂಭವಿಸುತ್ತದೆ ಆದ ಕಾರಣ ರೈತರು ಅತಿ ಹೆಚ್ಚು ನಷ್ಟ ಅನುಭವಿಸಬೇಕಿರುತ್ತದೆ.

ಇದು ಒಂದು ಶಿಲೀಂದ್ರ ಕಾರಕ ರೋಗವಾಗಿದ್ದು, ಕಾರಣಗಳು ಅನೇಕವಿವೆ, ಕೆಲವನ್ನು ಈ ಕೆಳಗೆ ನೆಮೂದಿಲು ಪ್ರಯತ್ನಮಾಡಿದ್ದೇವೆ.

  1. ಮುಖ್ಯವಾಗಿ ವಾತಾವರಣ. (ಅತಿ ಹೆಚ್ಚು ಮಳೆ / ನಿಲ್ಲದ ಮಳೆ / ಅನಿಯಂತ್ರಿತ ತೇವಾಂಶ).

  2. ಉತ್ತಮ ಮತ್ತು ರೋಗರಹಿತ ಬೀಜದ ಆಯ್ಕೆಯಲ್ಲಿ ವಿಫಲ.

  3. ಭೂಮಿ ತಯಾರಿಯಲ್ಲಿ, ಭೂಮಿಯ ಆಯ್ಕೆಯಲ್ಲಿ ಮಾಡುವ ತಪ್ಪುಗಳು.

ಪರಿಹಾರ:

  1. ರೋಗ ಗ್ರಸ್ಥ ತೋಟಕ್ಕೆ AVAF-18 ದ್ರಾವಣವನ್ನು 5 ಮಿ.ಲಿ. ಒಂದು ಲೀ. ನೀರಿಗೆ ಬೆರೆಸಿ ಇಡೀ ತೋಟದ ಮಣ್ಣಿಗೆ ನೀಡುವುದು, ಇದೇ ವಿಧಾನವನ್ನು ಒಂದು ವಾರದ ಅಂತರದಲ್ಲಿ ಎರಡು ಸಲ ಮಾಡುವುದು.

  2. ಮೂರನೇ ವಾರ SOIL STAR - GINGER GIANT ದ್ರಾವಣವನ್ನು 1 ಎಕರೆಗೆ 10 ಲೀ. ಮನ್ನಿಗೆ ನೀಡುವುದು.

  3. ನೀರು ಕಡಿಮೆ ಮಾಡುವುದು., ಎಲ್ಲೂ ನೀರು ನಿಲ್ಲದಂತೆ ಎಚ್ಚರವಹಿಸುವುದು.

  4. AISHWARYA ದ್ರಾವಣವನ್ನು 1 ಲೀ. ನೀರಿಗೆ 3 ಮಿ.ಲಿ. ಯಂತೆ ಮಿಶ್ರಣ ಮಾಡಿ ಸಿಂಪಡಣೆ ಮಾಡುವುದು.

  5. ಕೊಳೆ ಮರುಕಳಿಸಿದಲ್ಲಿ ತಕ್ಷಣವೇ ಮತ್ತೆ AVAF-18 ದ್ರಾವಣವನ್ನು ಉಪಯೋಗಿಸುವುದು.

7. ಶುಂಠಿಯಲ್ಲಿ ಬೆಂಕಿ ರೋಗ ಅಂದರೇನು ? ಅದಕ್ಕೆ ಕಾರಣಗಳೇನು ? ನಿರ್ವಹಣೆ ಹೇಗೆ ?

ಶುಂಠಿ ಬೆಳೆಯಲ್ಲಿ ಬೆಂಕಿ ರೋಗವೆಂದರೆ, ಶುಂಠಿ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗಲು ಪ್ರಾರಂಭವಾಗುತ್ತದೆ.

ಇದಕ್ಕೆ ಕಾರಣಗಳು:

  1. ಕಡಿಮೆ ನೆರಳು - ಶುಂಠಿಗೆ ನೆರಳು ಮತ್ತು ತಂಪಿನ ವಾತಾವರಣ ಬಹಳ ಅವಶ್ಯ ಆದ ಕಾರಣ, ವ್ಯತಿರಿಕ್ತ ವಾತಾವರಣದಲ್ಲಿ ಈ ಸಮಸ್ಯೆ ಉದ್ಭವವಾಗುತ್ತದೆ.

  2. ಪೋಷಕಾಂಶಗಳ ನಿರ್ವಹಣೆಯಲ್ಲಿ ಏರು ಪೇರು ಈ ಸಮಸ್ಯೆ ಉದ್ಭವವಾಗುತ್ತದೆ.

  3. ಸೂಕ್ಷ್ಮ ಜೀವಿಗಳಿಂದ ಸೋಂಕು.

ಪರಿಹಾರ:

  1. SOIL STAR - GINGER GIANT ದ್ರಾವಣವನ್ನು 1 ಎಕರೆಗೆ 10 ಲೀ. ಮಣ್ಣಿಗೆ ನೀಡುವುದು.

  2. AISHWARYA / PLANT REFRESH ದ್ರಾವಣವನ್ನು 1 ಲೀ. ನೀರಿಗೆ 3 ಮಿ.ಲಿ. ಯಂತೆ ಮಿಶ್ರಣ ಮಾಡಿ ಸಿಂಪಡಣೆ ಮಾಡುವುದು.