ತೆಂಗು

ತೆಂಗು ಅಂದರೆ ಕಲ್ಪವೃಕ್ಷ, ತೆಂಗಿನ ಪ್ರತಿ ಭಾಗವೂ ಮನುಷ್ಯನಿಗೆ ಬಹಳ ಉಪಯೋಗಿ. ತೆಂಗಿನ ಎಣ್ಣೆ, ಕೊಬ್ಬರಿ, ಎಳೆ ನೀರು ಮನುಷ್ಯನ ಆರೋಗ್ಯಕ್ಕೆ ಉಪಕಾರಿಯೆಂದು ಎಲ್ಲರಿಗೂ ತಿಳಿದ ವಿಷಯ. ನಮ್ಮ ದೇಶದಲ್ಲಿ ದಕ್ಷಿಣ ಭಾರತದಲ್ಲಿ ಹೆಚ್ಚಿಗೆ ಬೆಳೆಯಲಾಗುತ್ತದೆ. ತೆಂಗು ಉತ್ಪದನೆಯಲ್ಲಿ ಕರ್ನಾಟಕದ ಪಾತ್ರ ಬಹು ಮುಖ್ಯ, ಇಲ್ಲಿನ ತೆಂಗಿನ ಗುಣಮಟ್ಟ ಅತ್ಯುತ್ತಮ. ಆದರೂ ಕಾರಣಾಂತರಗಳಿಂದ ನಮ್ಮ ತೆಂಗು ಬೆಳೆಗಾರರು ಅನೇಕ ಸಮಸ್ಯೆಗಳಿಗೀಡಾಗಿದ್ದಾರೆ. ಆದ ಕಾರಣ ಅವರ ಸಮಸ್ಯೆಗಳಿಗೆ ಶಕ್ತಿ ಮೀರಿ ಪ್ರಯತ್ನವನ್ನು ಕೃಷಿ ಸಲಹಾ ಮಾಡುತ್ತಿದೆ ಆ ಕಾರಣದಿಂದ ಇಲ್ಲಿ ತೆಂಗಿನ ಬಗ್ಗೆ ಪ್ರೆಶ್ನೋತ್ತರಗಳನ್ನು ನೀಡಲಾಗಿದೆ.

 1. ತೆಂಗಿನ ತಳಿಯ ಆಯ್ಕೆ ಮಾಡುವುದು ಹೇಗೆ ?

ತೆಂಗು ಅನೇಕ ತಳಿಗಳಲ್ಲಿ ಲಭ್ಯವಿದೆ, ಆದರೆ ಎಲ್ಲಾ ತಳಿಗಳು ಎಲ್ಲಾ ಪ್ರದೇಶಗಳಿಗೆ ಸೂಕ್ತವಿಲ್ಲದಿರಬಹುದು. ಸಾಮಾನ್ಯವಾಗಿ ಪ್ರತಿ ಪ್ರದೇಶದ ಆಯಾ ಸ್ಥಳಿಯ ತಳಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮವೆಂದು ನಮ್ಮ ಅನಿಸಿಕೆ.

2. ತೆಂಗನ್ನು ಸಾಮಾನ್ಯವಾಗಿ ಕಾಡುವ ಕೀಟ ಮತ್ತು ಹುಳಗಳು ಯಾವುವು ?

 1. ಕೆಂಪು ಮೂತಿ ಹುಳ ಮತ್ತು ದುಂಬಿ - RED PALM WEEVIL

 2. ರೈನೋಸರಸ್ ದುಂಬಿ - Rhinoceros Beetle

 3. ಗೆದ್ದಲು - TERMITE

 4. ಹಿಟ್ಟು ತಿಗಣೆ -WHITE FLY

 5. ನುಸಿ - Coconut eriophyid mite

 6. ಗೊಣ್ಣೆ ಹುಳ - ROOT GRUB

 7. ಕಪ್ಪು ತಲೆ ಕೀಟ - BLACK HEAD CATERPILLER

ಹೀಗೆ ಇನ್ನು ಅನೇಕ

3. ಬೀಜಕ್ಕಾಗಿ ತೆಂಗಿನ ಆಯ್ಕೆ ಮಾಡುವುದು ಹೇಗೆ ?

20 ವರ್ಷಕ್ಕೂ ಹೆಚ್ಚು ವಯಸ್ಸಾದ, ಸರಿ ಸುಮಾರು ವರ್ಷಕ್ಕೆ 80ಕ್ಕೂ ಅಧಿಕ ಕಾಯಿ ನೀಡುವ ಮರದ ಕಾಯನ್ನು ಬೀಜಕ್ಕಾಗಿ ಆಯ್ಕೆ ಮಾಡುವುದು ಉತ್ತಮ.

4. ತೆಂಗಿಗೆ ಸಾಮಾನ್ಯವಾಗಿ ಕಾಡುವ ರೋಗಗಳು ಯಾವು ?

 1. ಕಾಂಡ ಸೋರುವ ರೋಗ. - STEM DISCHARGE

 2. ಅಣಬೆ ರೋಗ. - FOOT ROT

 3. ಕಣ್ಣು ಕೊಳೆ (ಸುಳಿ ಕೊಳೆ) ರೋಗ - BUD ROT

 4. ಎಲೆ ಚುಕ್ಕೆ ರೋಗ.

5. ತೆಂಗಿನ ತಳಿಗಳ ಬಗ್ಗೆ ವಿವರಿಸಿ.

ತೆಂಗಿನಲ್ಲಿ ಅನೇಕ ತಳಿಗಳಿವೆ, ಇಲ್ಲಿ ಕೇವಲ ಕೆಲವನ್ನು ತಿಳಿಸಿಲಾಗಿದೆ. ಸಾಮಾನ್ಯವಾಗಿ ಇವು ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಬಳಸುವು ತಳಿಗಳು.

 1. ಅರಸಿಕೆರೆ ಟಾಲ್, ಟಿಪ್ಟೂರ್ ಟಾಲ್, ವೆಸ್ಟ ಕೋಸ್ಟ ಟಾಲ್ - ಈ ತಳಿಗಳು ಎತ್ತರದ ತಳಿಗಳಾಗಿದ್ದು, ಯಾವುದೇ ಭೌಗೋಳಿಕ ಮತ್ತು ಹವಾಮಾನಕ್ಕೆ ಹೊಂದಿ ಕೊಂಡು ಬೆಳೆಯುವುದೆ ಈ ತಳಿಗಳ ವಿಶೇಷ.

 2. ಗಂಗಾ ಬೋಂಡಂ, ಚೌಘಾಟ್ ಗಿಡ್ಡ, ಮಲಯನ್ ಗಿಡ್ಡ - ಈ ತಳಿಗಳು ಗಿಡ್ಡ ತಳಿಗಳಾಗಿದ್ದು, ಬೇಗ ಫಲ ನೀಡಲಾರಂಬಿಸುತ್ತವೆ. ಆದರೆ ವರ್ಷದಿಂದ ವರ್ಷಕ್ಕೆ ಇಳುವರಿಯಲ್ಲಿ ವ್ಯತ್ಯಾವಿರುತ್ತದೆ. ಈ ತಳಿಗಳು ಎಳೆನೀರಿಗೆ ಸೂಕ್ತ.

 3. T X D (TALL & DWARF), D X T (DWARF & TALL), NCD (Natural Cross Dwarf) ತಳಿಗಳು ಸಂಕರಣ ತಳಿಗಳಾಗಿದ್ದು ಬೇಗ, ಉತ್ತಮ ಕೊಬ್ಬರಿ, ಎಣ್ಣೆ ಕಾರಣದಿಂದಾಗಿ ಜನಪ್ರೀಯವಾಗಿವೆ.

 4. ಚಂದ್ರ ಕಲ್ಪ - ಇದು ಲಕ್ಷದೀಪಗಳಲ್ಲಿಯ ತಳಿಯಾಗಿದ್ದು ಕರಾವಳಿ ಮತ್ತು ಮೈದಾನ ಪ್ರದೇಶಗಳಲ್ಲಿ ಉತ್ತಮ ಫಲಿತಾಂಶ ತೋರಿದೆ. ಇದರ ಕೊಬ್ಬರಿಯಲ್ಲಿ ಶೇಖಡ 70% ಎಣ್ಣೆಯ ಕಾರಣ, ಉತ್ತಮ ತಳಿಯಾಗಿದೆ.

6. ತೆಂಗಿನ ಸಸಿ ನಾಟಿಮಾಡಲು, ಸಸಿಗಳ ಅಂತರ ಎಷ್ಟಿದ್ದರೆ ಉತ್ತಮ ?

ಗಿಡದಿಂದ ಗಿಡಕ್ಕೆ ಅಂತರ ಪ್ರದೇಶದಿಂದ ಪ್ರದೇಶಕ್ಕೆ ನೋಡಿ ನಾಟಿಮಾಡುವುದು ಉತ್ತಮ. ಕೆಲವು ಉದಾಹರಣೆಗಳು ಕೆಳಗಿವೆ.

 1. ಒಣ ಮತ್ತು ಗುಡ್ಡುಗಾಡು ಪ್ರದೇಶಗಳಲ್ಲಿ ಎತ್ತರ ತಳಿಗಳನ್ನು ಆಯ್ಕೆ ಮಾಡಿಕೊಂಡು ಗಿಡದಿಂದ ಗಿಡಕ್ಕೆ 30 ಅಡಿಗಳ ಅಂತರ ಉತ್ತಮ, ಹೀಗೆ ನಾಟಿ ಮಾಡಿದರೆ ಒಂದು ಎಕರೆಗೆ ಸುಮಾರು 50 ಗಿಡಗಳನ್ನು ನಾಟಿಮಾಡಬಹುದು.

 2. ಕರಾವಳಿ ಪ್ರದೇಶಗಳಲ್ಲಿ - 25 ಅಡಿಗಳ ಅಂತರ ಉತ್ತಮ.

 3. ಒಣ, ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಗಿಡ್ಡ ಮತ್ತು ಸಂಕರಣ ತಳಿಗಳು 25 ಅಡಿಗಳ ಅಂತರದಲ್ಲಿ ನಾಟಿಮಾಡಬಹುದು.

 4. ತೋಟದ ಅಂಚಿನಲ್ಲಿ ಬೆಳೆಯುವುದಾದರೆ 22 ಅಡಿಗಳಷ್ಟು ಅಂತರ ಉತ್ತಮ.

7. ತೆಂಗಿನ ಸಸಿ ನಾಟಿಮಾಡಲು ಉತ್ತಮ ಸಮಯ ಯಾವುದು ?

ತೆಂಗಿನ ಸಸಿಗಳನ್ನು ನಾಟಿಮಾಡಲು ಜೂನ್ ಮತ್ತು ಜುಲೈ ತಿಂಗಳುಗಳು ಸೂಕ್ತ.

8. ತೆಂಗು ಬೆಳೆಯಲು ಯಾವ ಮಾದರಿಯ ಮಣ್ಣು ಸೂಕ್ತ ?

ತೆಂಗಿನ ವಿಶೇಷವೆಂದರೆ, ಇದು ಅನೇಕ ಮಣ್ಣಿನ ಮಾದರಿಗಳಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಉದಾಹರಣೆಗೆ ಮರಳು ಮಿಶ್ರಿತ ಮಣ್ಣು, ಆಳ ಮರಳು ಭೂಮಿಗಳು, ನೀರು ನಿಲ್ಲುವ, ಗೋಡು, ಜೇಡಿ ಮಣ್ಣಿನಲ್ಲೂ ಬೆಳೆಯ ಬಹುದಾಗಿದೆ.

9. ತೆಂಗಿನಲ್ಲಿ ಯಾವ ಅಂತರ ಬೆಳೆಗಳನ್ನು ಬೆಳೆಯ ಬಹುದು ?

ತೆಂಗಿನಲ್ಲಿ ಮರದ ವಯಸ್ಸು, ಅಂತರ, ನೀರಿನ ಲಭ್ಯತೆ ಮತ್ತು ಹವಾಮಾನ, ಮಣ್ಣಿನ ಗುಣಗಳ ಆಧರಿಸಿ ಅನೇಕ ಅಂತರ ಬೆಳೆಗಳನ್ನು ಮಾಡಹುದು.

 1. ಬಾಳೆ

 2. ಕಡಿಮೆ ವಯಸ್ಸಿನ ತೆಂಗಿನಲ್ಲಿ - ತರಕಾರಿ, ದ್ವಿದಳ ಧಾನ್ಯಗಳು, ಅರಶಿನ ಬೆಳೆಯಬಹುದು.

 3. 25 ವರ್ಷಗಳ ತೋಟಗಳಲ್ಲಿ ಕೋ ಕೋ, ದಾಲ್ಚಿನ್ನಿ, ಕರಿ ಮೆಣಸು, ಜಾಯಿಕಾಯಿ, ಸರ್ವ ಸಾಂಬಾರ, ಲವಂಗ, ವೆನಿಲ್ಲಾ, ನುಗ್ಗೆ, ಕರಿ ಬೇವು, ಪಚೋಲಿ, ನೆಲಬೇವು, ತುಳಸಿ, ನಿಂಬೆ ಹುಲ್ಲು, ಹಿಪ್ಪಲಿ, ಕಾಫಿ.

 4. ಅನೇಕ ಬಗೆಯ ಹುಲ್ಲುಗಳನ್ನು ಬೆಳೆದು ಪಶುಸಂಗೋಪನೆಗೆ ಬಳಸಬಹುದಾಗಿದೆ.

10. ಯಾವ ಬೆಳೆಗಳನ್ನು ತೆಂಗಿನಲ್ಲಿ ಅಂತರ ಬೆಳೆಗಳಾಗಿ ಬೆಳೆಯುವುದು ಸೂಕ್ತವಲ್ಲ.

 1. ಮಾವು, ಸೀಬೆ, ಸಪೋಟ ಮತ್ತು ನಿಂಬೆ ಇವುಗಳನ್ನು ಅಂತರ ಬೆಳೆಯಾಗಿ ಬೆಳೆಯದಿರುವುದು ಉತ್ತಮ.

 2. ಬೇರುಗಳು ಆಳಕ್ಕೆ ಹೋಗುವ ಯಾವುದೇ ಬೆಳೆಯನ್ನು ತೆಂಗಿನ ಬುಡದ 2 ಮೀಟರ್ ಸುತ್ತಳತೆಯಲ್ಲಿ ಬೆಳೆಯುವುದು ಸೂಕ್ತ.

11. ಕೆಂಪು ಮೂತಿ ಹುಳ ಅಥವಾ ಬುಡ ಕೊರೆವ (RED PALM WEEVIL) ಹುಳಕ್ಕೆ ತುತ್ತಾಗಿರುವ ತೆಂಗಿನ ಗಿಡ ಅಥವಾ ಮರಗಳನ್ನು ಗುರುತಿಸುವುದು ಹೇಗೆ ?

 1. ಮರಿ ಹುಳಗಳು ಮತ್ತು ಇದರ ದುಂಬಿಗಳು ಕಾಂಡದಲ್ಲಿ ರಂಧ್ರಗಳನ್ನು ಮಾಡಿರುತ್ತವೆ, ಅದನ್ನು ಗಮನಿಸ ಬೇಕು.

 2. ತೆಂಗಿನ ಕಾಂಡದಲ್ಲಿ ರಂಧ್ರಗಳಾಗಿ ಅವುಗಳಿಂದ ಅಂಟು ದ್ರವ ಬರುವುದನ್ನು ಗಮನಿಸಿ, ಇದು ಸಹ ಈ ಕೀಟದ ಉಪಟಳವೆ.

 3. ಈ ಕೀಟಗಳ ಸಮಸ್ಯೆಗೊಳಗಾದ ಮರಗಳಲ್ಲಿ ನಾರು ಕಣಿಸುತ್ತದೆ.

 4. ಹೆಚ್ಚಿಗೆ ಚಿಕ್ಕ ಗಿಡಗಳಲ್ಲಿ ಗಮನಿಸ ಬಹುದು ಮತ್ತು ಆಸಕ್ತಿ ವಹಿಸಿ ಗಮನಿಸಿದರೆ ಕಾಣಸಿಗುತ್ತವೆ.

ಈ ಕೀಟಗಳ ಕೆಲ ಚಿತ್ರಗಳನ್ನು ಕೆಳಗೆ ನೀಡಲಾಗಿದೆ ಗಮನಿಸಿ.

ಕೆಂಪು ಮೂತಿ ಹುಳ ಭಾದಿತ ತೆಂಗಿನ ಕಾಂಡ


ಕೆಂಪು ಮೂತಿ ಹುಳ


ವಯಸ್ಕಾವಸ್ಥೆಯಲ್ಲಿರುವ ದುಂಬಿ


12. ಕೆಂಪು ಮೂತಿ ಹುಳ ಅಥವಾ ಬುಡ ಕೊರೆವ (RED PALM WEEVIL) ಹುಳಗಳ ನಿರ್ವಹಣೆ ಹೇಗೆ ?

ನಾವಿಲ್ಲಿ ಕೇವಲ ಸಾವಯವ ಪದ್ಧತಿಗಳಲ್ಲಿ ನಿರ್ವಹಣಾ ಕ್ರಮಗಳನ್ನು ಮಾತ್ರ ನೀಡುತ್ತೇವೆ.

 1. ಹುಡುಕಿ ಕೊಲ್ಲುವುದು - ಗಿಡದ ಬುಡಗಳನ್ನು ಸೂಕ್ಷ್ಮವಾಗಿ ಗಮನಿಸಿ, ರಂಧ್ರಗಳಿದ್ದರೆ, ಅದರಲ್ಲಿ ಮೊನಚಾದ ಕಬ್ಬಿಣದ ಸಲಾಕೆಯಿಂದ ತಿವಿಯುವುದು, ತಿವಿದ ನಂತರ ಸಗಣಿ ಮತ್ತು ಸೀಮೆ ಎಣ್ಣೆಯನ್ನು ಕಲಿಸಿ ಆ ರಂದ್ರವನ್ನು ಮುಚುವುದು. ಈ ಕಾರಣದಿಂದ ಒಳಗೆ ಹುಳ ಉಸಿರಾಡದೆ ಸಾಯುವ ಸಾಧ್ಯತೆಗಳಿರುತ್ತವೆ.

 2. ಮಾರುಕಟ್ಟೆಯಲ್ಲಿ ಸಿಗುವ ಲಿಂಗಾರ್ಕಷಕಗಳನ್ನು ಬಕೆಟ್ ಟ್ರ್ಯಾಪ್ ಸಹಿತ ಬಳಸಿ, ವಯಸ್ಕ ದುಂಬಿಗಳನ್ನು ಆಕರ್ಷಿಸಿ ಕೊಲ್ಲುವುದರಿಂದ ಅವುಗಳ ಸಂತಾನೋತ್ಪತ್ತಿಯ ಮೇಲೆ ಹತೋಟಿ ತರಹುದು.

 3. ಆ ತೋಟದಲ್ಲಿನ ಎಲ್ಲಾ ಗಿಡಗಳಿಗೆ "ಸಾಯಿಲ್ ಸ್ಟಾರ್ ", ಕೃಷಿ ನಿರ್ಮಾಣ್, ಅಥವಾ ಸಾಯಿಲ್ ರೀಪ್ರೆಷ ಎಂಬ ಯಾವುದಾದರೂ ಒಂದು ದ್ರಾವಣವನ್ನು ಪ್ರತಿ ಮರಕ್ಕೆ 100 ಮಿ.ಲಿ. ನೀಡುವುದು. ನೀಡುವು ಮುನ್ನ ಗಿಡಕ್ಕೆ ನೀರು ಕೊಟ್ಟಿರಬೇಕು ಮತ್ತು ಆ ಗಿಡಕ್ಕೆ ಕನಿಷ್ಟ ಮೂರು ತಿಂಗಳೊಳಗೆ ಕೊಟ್ಟಿಗೆ ಗೊಬ್ಬರ ಖಚಿತವಾಗಿ ನೀಡಿರಬೇಕು.

 4. SOIL CLEAN ದ್ರಾವಣವನ್ನು 5 ಮಿ.ಲಿ. 1 ಲೀ. ನೀರಿಗೆ ಮಿಶ್ರಣ ಮಾಡಿ. ತೆಂಗಿನ ಗಿಡಗಳ ಬುಡಕ್ಕೆ ಸುಮಾರು 4 ಲೀ ನೀಡುವುದು ಮತ್ತು ಒಂದು ವಾರದ ನಂತರ ಇದನ್ನೇ ಇನ್ನೊಮ್ಮೆ ಪಾಲಿಸುವುದು.

13. ಸುಳಿ ಕೊರೆವ ದುಂಬಿ,ಅಥವಾ ರೈನೋಸರಸ್ (RHINOCEROS BEETLE)ಗೆ ತುತ್ತಾಗಿರುವ ತೆಂಗಿನ ಗಿಡ ಅಥವಾ ಮರಗಳನ್ನು ಗುರುತಿಸುವುದು ಹೇಗೆ ?

 1. ಈ ದುಂಬಿಯ ಉಪಟಳದಿಂದ ಹೊರ ಬರುವ ಹೂ ಮತ್ತು ಗೊಂಚಲಿನ ಕವಚವನ್ನು ಕೊರೆದಿರುತ್ತದೆ.

 2. ಹಾನಿಗೊಳಗಾದ ಗರಿಗಳು X ಆಕಾರದಲ್ಲಿ ಕತ್ತರಿಸಿದಂತೆ ಕಾಣಿಸುತ್ತವೆ.

 3. ಗೊಂಚಲುಗಳು ಒಣಗುತ್ತವೆ.

14. ಸುಳಿ ಕೊರೆವ ದುಂಬಿ ಅಥವಾ ರೈನೋಸರಸ್ (RHINOCEROS BEETLE)ಗೆ ತುತ್ತಾದ ಮರಗಳನ್ನು ನಿರ್ವಹಿಸುವುದು ಹೇಗೆ ?

 1. ಕಬ್ಬಿಣದ ಕೊಕ್ಕೆಯಿಂದ ರಂಧ್ರದೊಳಗಿನ ದುಂಬಿಯನ್ನು ಹೊರತೆಗೆದು ಕೊಳ್ಳುವುದು ಮತ್ತು ಆ ರಂಧ್ರಕ್ಕೆ ಸಗಣಿ ಮತ್ತು ಸೀಮೆ ಎಣ್ಣಿ ಮಿಶ್ರಣವನ್ನು ತುಂಬುವುದು.

 2. ಮಾರುಕಟ್ಟೆಯಲ್ಲಿ ಸಿಗುವ ಲಿಂಗಾರ್ಕಷಕಗಳನ್ನು ಬಕೆಟ್ ಟ್ರ್ಯಾಪ್ ಸಹಿತ ಬಳಸಿ, ವಯಸ್ಕ ದುಂಬಿಗಳನ್ನು ಆಕರ್ಷಿಸಿ ಕೊಲ್ಲುವುದರಿಂದ ಅವುಗಳ ಸಂತಾನೋತ್ಪತ್ತಿಯ ಮೇಲೆ ಹತೋಟಿ ತರಹುದು.

 3. ಆ ತೋಟದಲ್ಲಿನ ಎಲ್ಲಾ ಗಿಡಗಳಿಗೆ "ಸಾಯಿಲ್ ಸ್ಟಾರ್ ", ಕೃಷಿ ನಿರ್ಮಾಣ್, ಅಥವಾ ಸಾಯಿಲ್ ರೀಪ್ರೆಷ ಎಂಬ ಯಾವುದಾದರೂ ಒಂದು ದ್ರಾವಣವನ್ನು ಪ್ರತಿ ಮರಕ್ಕೆ 100 ಮಿ.ಲಿ. ನೀಡುವುದು. ನೀಡುವು ಮುನ್ನ ಗಿಡಕ್ಕೆ ನೀರು ಕೊಟ್ಟಿರಬೇಕು ಮತ್ತು ಆ ಗಿಡಕ್ಕೆ ಕನಿಷ್ಟ ಮೂರು ತಿಂಗಳೊಳಗೆ ಕೊಟ್ಟಿಗೆ ಗೊಬ್ಬರ ಖಚಿತವಾಗಿ ನೀಡಿರಬೇಕು.

 4. SOIL CLEAN ದ್ರಾವಣವನ್ನು 5 ಮಿ.ಲಿ. 1 ಲೀ. ನೀರಿಗೆ ಮಿಶ್ರಣ ಮಾಡಿ. ತೆಂಗಿನ ಗಿಡಗಳ ಬುಡಕ್ಕೆ ಸುಮಾರು 4 ಲೀ ನೀಡುವುದು ಮತ್ತು ಒಂದು ವಾರದ ನಂತರ ಇದನ್ನೇ ಇನ್ನೊಮ್ಮೆ ಪಾಲಿಸುವುದು.

ಲಾರ್ವ ಹಂತದಲ್ಲಿರುವ ಹುಳ

ರೈನೋಸರಸ್ (RHINOCEROS BEETLE)

ಯುವಾವಸ್ಥೆಯಲ್ಲಿರುವ ದುಂಬಿ

ರೈನೋಸರಸ್ (RHINOCEROS BEETLE)

15. ತೆಂಗಿಗೆ ನುಸಿ ಅಂದರೇನು ? ಮತ್ತು ಅದರ ಪರಿಣಾಮಗಳೇನು ?

ಸಮಾರು 2000 ನೇ ಇಸವಿಯಿಂದ ಈಚೆಗೆ ಈ ಸಮಸ್ಯೆ ಹೆಚ್ಚಿದೆ. ನಮ್ಮ ರೈತರು ಸಾಮಾನ್ಯವಾಗಿ ಕೆರೆಯುವ ನುಸಿ ಅಂದರೆ ತೆಂಗಿನ ಕಾಯಿಯ ಹೊರಭಾಗ ವಿಕೃತವಾಗಿ ಗಟ್ಟಿಗೊಳ್ಳುತ್ತದೆ. ಇದಕ್ಕೆ ಮುಖ್ಯಕಾರಣ ಕಾಯಿ ಎಳೆ ಹಂತದಲ್ಲಿದ್ದಾಗ ಹೇನು(MITES) ರಸ ಹೀರುವ ಕಾರಣ, ಕಾಯಿ ಬೆಳೆಯುತ್ತಾ ವಿಕಾರವಾಗಿ ಕಾಣಿಸುತ್ತದೆ ಮತ್ತು ಕಾಯನ್ನು ನಾರಿನಿಂದ ಬಿಡಿಸಲು ಸಹ ಕಷ್ಟವಾಗುತ್ತದೆ.

16. ತೆಂಗಿಗೆ ಬರುವ ನುಸಿಯನ್ನು ನಿರ್ವಹಣೆ ಮಾಡಿ ಉತ್ತಮ ಇಳುವರಿಯನ್ನು ಹೇಗೆ ಪಡೆಯಬಹುದು ?

ಈ ಸಮಸ್ಯೆಗೆ ಪರಿಹಾರ ಕೆಳಗಿನಂತಿದೆ:

 1. ಪ್ರತಿ ವರ್ಷ ಪ್ರತಿ ತೆಂಗಿನ ಮರಕ್ಕೆ ತಪ್ಪದೆ 50 Kg. ಕೊಟ್ಟಿಗೆ ಗೊಬ್ಬರ ನೀಡುವುದು.

 2. ಪ್ರತಿ ವರ್ಷ ಒಮ್ಮೆ ದ್ವಿದಳ ಧಾನ್ಯಗಳ ಮಲ್ಚಿಂಗ್ ಮಾಡುವುದು.

 3. ಸಮಯಕ್ಕೆ ಸರಿಯಾಗಿ ನೀರು ಕೊಡುವುದು.

 4. ಪ್ರತಿ ಆರು ತಿಂಗಳಿಗೊಮ್ಮೆ SOIL STAR -ADVANCED ದ್ರಾವಣವನ್ನು ಪ್ರತಿಮರಕ್ಕೆ 100 ಮಿ.ಲಿ. ನೀಡುವುದು.

ಈ ವಿಧಾನವನ್ನು ಪಾಲಿಸಿದಲ್ಲಿ ಕೇವಲ ಉತ್ತಮ ಗುಣಮಟ್ಟದ ಕಾಯಿಗಳಲ್ಲದೆ, ಹೆಚ್ಚು ಕಾಯಿಗಳನ್ನು ಅಂದರೆ ವಾರ್ಷಿಕವಾಗಿ ಸುಮಾರು 250 ರಿಂದ 300 ಕಾಯಿಗಳನ್ನು ಪಡೆಯಬಹುದು, ಕೊಬ್ಬರಿಯಲ್ಲಿ ಎಣ್ಣೆ ಅಂಶ ಹೆಚ್ಚಿಸಬಹುದಾಗಿದೆ

17. ತೆಂಗಿನ ಮರದ ಬುಡದಲ್ಲಿ ಅಂಟು ಸೋರುತ್ತಿದೆ ಏನಿದು ? ಇದರ ನಿರ್ವಹಣೆ ಹೇಗೆ ?

ತೆಂಗಿನ ಮರಗಳ ಬುಡ ವಿಸರ್ಜನೆ ಅಥವಾ ಬುಡದಲ್ಲಿ ಸೋರುವುದು, ಇದು ಒಂದು ಶಿಲೀಂದ್ರ ಕಾರಕವಾಗಿದ್ದು, ಮರದಿಂದ ಮರಕ್ಕೆ ಹರಡುವ ಎಲ್ಲಾ ಸಾಧ್ಯತೆಗಳಿವೆ. ಈ ಸಮಸ್ಯೆಗೆ ಅನೇಕ ಕಾರಣಗಳು ಕೆಳಗಿನಂತಿವೆ.

 1. ಅತಿ ಕಡಿಮೆ ನೀರು ಅಥವಾ ಕೆಟ್ಟ ನೀರಿನ ನಿರ್ವಹಣೆ.

 2. ಅನೇಕ ವರ್ಷಗಳಿಂದ ಕೊಟ್ಟಿಗೆ ಗೊಬ್ಬರ ಬಳಸದಿರುವುದು.

 3. ಕೃತಕ ರಾಸಾಯನಿಕಗಳ ಬಳಕೆ.

 4. ತುಂತುರು ನೀರಾವರಿಯ ಪರಿಕರಗಳಿಂದ ಬುಡಕ್ಕೆ ನೀರು ಅನೇಕ ದಿನಗಳಿಂದ ಬೀಳುವುದು.

ಹೀಗೆ ಇನ್ನೂ ಅನೇಕ ಕಾರಣಗಳಿವೆ.

ಈ ರೋಗವನ್ನು ಅಥವಾ ಶಿಲೀಂದ್ರವನ್ನು ನಿರ್ವಹಣೆ ಮಾಡಬಹುದಾದರು, ಇದಕ್ಕೆ ಹೆಚ್ಚು ಸಮಯ ತಗಲುತ್ತದೆ ಅದು 6 ತಿಂಗಳಿನಿಂದ ಹಿಡಿದು ಇನ್ನು ಹೆಚ್ಚಿಗೆ. ಅದರ ನಿರ್ವಹಣಾ ಕ್ರಮಗಳು ಕೆಳಗಿನಂತಿವೆ.

 1. ಪ್ರತಿ ಮರಕ್ಕೆ 50Kg. ಕೊಟ್ಟಿಗೆ ಗೊಬ್ಬರದ ಜೊತೆ 1 ಕೆ.ಜಿ.ಯಷ್ಟು ಸುಣ್ಣದ ಪುಡಿ, 2 ಕೆ.ಜಿಯಷ್ಟು ಒಲೆ ಬೂದಿಯನ್ನು ನೀಡುವುದು.

 2. ರಸ ಸೋರುತ್ತಿರುವ ಕಡೆ ಸಣ್ಣ ರಂದ್ರಗಳನ್ನು ಗಮನಿಸಬಹುದಾಗಿದೆ, ಆ ಸ್ಥಳಕ್ಕೆ AVAF-18 ದ್ರಾವಣವನ್ನು 5 ಮಿ.ಲಿ. ಒಂದು ಲೀ. ನೀರಿಗೆ ಮಿಶ್ರಣ ಮಾಡಿ ರಸ ಸೋರುತ್ತಿರುವ ಸ್ಥಳದಲ್ಲಿ ಪಿಚಕಾರಿ ಮಾಡಬೇಕು ಮತ್ತು ಅದನ್ನು ಹಸು ಸಗಣಿಯಿಂದ ಮುಚ್ಚ ಬೇಕು. ಇದೇ ವಿಧಾನವನ್ನು 4 ವಾರ ಮಾಡುವುದು.

 3. ರೋಗವಿರುವ ಮರ ಮತ್ತು ಪಕ್ಕದ ಮರಗಳಿಗೆ 6 ತಿಂಗಳಿಗೊಮ್ಮೆ SOIL STAR -ADVANCED ದ್ರಾವಣವನ್ನು 100 ಮಿಲಿ. ಒಂದು ಮರದ ಬುಡಕ್ಕೆ ನೀಡುವುದು.