ಅಡಿಕೆ

 1. ಅಡಿಕೆ ನಾಟಿ ಮಾಡಿದ ಎಷ್ಟು ವರ್ಷಗಳಲ್ಲಿ ಫಸಲು ಕೊಡಲಾರಂಬಿಸುತ್ತದೆ ?

ಸಾಮಾನ್ಯವಾಗಿ ಅಡಿಕೆ ಗಿಡಗಳನ್ನು ನಾಟಿ ಮಾಡಿದ ನಂತರ ಉತ್ತಮವಾಗಿ ಹಾರೈಕೆ ಮಾಡಿದರೆ ಮೂರು ವರ್ಷ ಆರು ತಿಂಗಳಿನಿಂದ ಫಸಲು ನೀಡುವ ಸಾಧ್ಯತೆ ಇದೆ.

2. ನಾಟಿ ಮಾಡಲು ಸೂಕ್ತ ಗಿಡಗಳ ಆಯ್ಕೆ ಮಾಡುವುದು ಹೇಗೆ ?

ತಳಿಯನ್ನು ಆಯ್ಕೆ ಮಾಡಿದ ನಂತರ, ಸುಮಾರು 45 ಸೆಂ. ಮೀಟರ್(18 ಇಂಚು) ಇರುವ ಮತ್ತು ಕನಿಷ್ಟ 5 ಎಲೆ ಇರುವ ಸಸಿಯನ್ನು ಆಯ್ದುಕೊಳ್ಳುವುದು ಉತ್ತಮ.

3. ಅಡಿಕೆ ತಳಿಯ ಆಯ್ಕೆ ಮಾಡುವುದು ಹೇಗೆ ?

ಇದು ಕ್ಲಿಷ್ಟವಾದ ಪ್ರಶ್ನೆ, ಈ ವಿಷಯದಲ್ಲಿ ರೈತರು ಪ್ರಯೋಗ ಮಾಡುವುದು ಸಲ್ಲ, ಆದುದರಿಂದ ಅವರು ಸ್ವಲ್ಪ ಸಮಯವನ್ನು ತಳಿಯ ಆಯ್ಕೆಯಲ್ಲಿ ಮೀಸಲಿಡುವುದು ಅವಶ್ಯ. ಸಾಮಾನ್ಯವಾಗಿ ರೈತರು ತಾವು ಬೆಳೆ ಮಾಡುವ ಪರಿಸರದಲ್ಲಿ ಉತ್ತಮ ಇಳುವರಿ, ಗುಣಮಟ್ಟ, ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಇದಕ್ಕೆ ಪ್ರಯೋಗ ಮಾಡುವ ಬದಲು, ತಮ್ಮ ಸಹ ರೈತರ ಜೊತೆ ಮಾಹಿತಿ ವಿನಿಮಯ ಮಾಡಿಕೊಂಡು, ಆ ಪರಿಸರದಲ್ಲಿ ಉತ್ತಮ ಬೆಳೆ ಮಾಡುತ್ತಿರುವ ರೈತರನ್ನು ಗಮನಿಸಿ ಅವರು ಬಳಸಿರುವ ತಳಿಯನ್ನು ಆಯ್ಕೆ ಮಾಡುವುದು ಉತ್ತಮ.

4. ಅಡಿಕೆ ನಾಟಿ ಮಾಡಲು ಉತ್ತಮ ಸಮಯ ಯಾವುದು ?6. ಅಡಿಕೆ ಮರಗಳ ಮದ್ಯೆ ಅಂತರ ಎಷ್ಡು ಅಡಿಗಳಿದ್ದರೆ ಉತ್ತಮ.

ಅಡಿಕೆ ಮರಗಳ ಮದ್ಯೆ ಅಂತರ ಬಹಳ ಮುಖ್ಯವಾದ ನಿಯತಾಂಕ, ಇದನ್ನು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ವಹಿಸುವುದು ಉತ್ತಮ. ಉದಾಹರಣೆಗೆ ಎರಡು ಮರಗಳ ಮತ್ತು ಸಾಲುಗಳ ಮದ್ಯೆ ಕಳೆ ನಿಯಂತ್ರಿಸಲು ಸುಲಭವಾಗಿ ಟ್ರ್ಯಾಕ್ಟರ್ ಓಡಿಸುವಂತಿರ ಬೇಕು, ಅಂತರ ಬೆಳೆ ಮಾಡಲು ಅನುಕೂಲವಾಗಿರಬೇಕು, ಈ ಕಾರಣಗಳಿಂದ 8 x 8 ಅಥವಾ 8 x 9 ಅಡಿಗಳ ಅಂತರ ಸೂಕ್ತವೆಂದು ಕೆಲ ಪ್ರಗತಿ ಪರ ರೈತರ ಹೇಳಿಕೆ.

ಮೇ, ಜೂನ್, ಸೆಪ್ಟೆಂಬರ್, ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ನಾಟಿ ಮಾಡುವುದು ಉತ್ತಮ.

5. ಅಡಿಕೆಗೆ ಯಾವಾಗ ಕೊಟ್ಟಿಗೆ ಗೊಬ್ಬರ ನೀಡುವುದು ಉತ್ತಮ ?

ಅಡಿಕೆಗೆ ಕೊಟ್ಟಿಗೆ ಗೊಬ್ಬರ ಅತಿ ಮುಖ್ಯ, ಒಂದು ವರ್ಷದಲ್ಲಿ ವಿಭಜಿಸಿ ಎರಡು ಸಲ ನೀಡುವುದು ಉತ್ತಮ. ಸಾಮಾನ್ಯವಾಗಿ ಮಾರ್ಚ - ಏಪ್ರಿಲ್ ಮತ್ತು ಸೆಪ್ಟೆಂಬರ್ - ಅಕ್ಟೋಬರ್ ತಿಂಗಳುಗಳಲ್ಲಿ ನೀಡುವುದು ಉತ್ತಮ.

6. ಅಡಿಕೆ ಮರಗಳ ಮದ್ಯೆ ಅಂತರ ಎಷ್ಡು ಅಡಿಗಳಿದ್ದರೆ ಉತ್ತಮ.

ಅಡಿಕೆ ಮರಗಳ ಮದ್ಯೆ ಅಂತರ ಬಹಳ ಮುಖ್ಯವಾದ ನಿಯತಾಂಕ, ಇದನ್ನು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ವಹಿಸುವುದು ಉತ್ತಮ. ಉದಾಹರಣೆಗೆ ಎರಡು ಮರಗಳ ಮತ್ತು ಸಾಲುಗಳ ಮದ್ಯೆ ಕಳೆ ನಿಯಂತ್ರಿಸಲು ಸುಲಭವಾಗಿ ಟ್ರ್ಯಾಕ್ಟರ್ ಓಡಿಸುವಂತಿರ ಬೇಕು, ಅಂತರ ಬೆಳೆ ಮಾಡಲು ಅನುಕೂಲವಾಗಿರಬೇಕು, ಈ ಕಾರಣಗಳಿಂದ 8 x 8 ಅಥವಾ 8 x 9 ಅಡಿಗಳ ಅಂತರ ಸೂಕ್ತವೆಂದು ಕೆಲ ಪ್ರಗತಿ ಪರ ರೈತರ ಹೇಳಿಕೆ.7. ಅಡಿಕೆ ತೋಟದಲ್ಲಿ ಕಳೆ ನಿರ್ವಹಣೆ ಮಾಡುವುದು ಹೇಗೆ ?

ಅಡಿಕೆಯಲ್ಲಿ ಕಳೆ ಉತ್ತಮವಾಗಿ ನಿರ್ವಹಣೆ ಮಾಡುವುದುರಿಂದ ಇಳುವರಿಯನ್ನು ಹೆಚ್ಚಿಸಬಹುದಾಗಿದೆ. ಸಮಯದಿಂದ ಸಮಯಕ್ಕೆ ಕೆಲ ವಿಧಾನಗಳನ್ನು ಪಾಲಿಸಿದಲ್ಲಿ ಸುಲಭವಾಗಿ ಕಳೆಯನ್ನು ನಿರ್ವಹಣೆ ಮಾಡಬಹುದು.

 1. ವರ್ಷಕ್ಕೊಮ್ಮೆ ದ್ವಿದಳ ಧಾನ್ಯಗಳ ಮಲ್ಚಿಂಗ್ ಪದ್ಧತಿಯನ್ನು ತಪ್ಪದೆ ಪಾಲಿಸುವುದು, ಇದರಿಂದ ಕೇವಲ ಕಳೆ ಕಡಿಮೆಯಾಗುವುದಲ್ಲದೆ, ಭೂಮಿಯಲ್ಲಿ ಸಾವಯವ ಇಂಗಾಲವನ್ನು ಹೆಚ್ಚಾಗಲು ಅನುಕೂಲವಾಗುತ್ತದೆ.

 2. ಬೆಳೆಗೆ ನೀರು ನೀಡಲು ಹನಿ ನೀರಾವರಿ ಪದ್ಧತಿಯನ್ನು ಅನುಸರಿಸುವುದು.

 3. ಕೊಟ್ಟಿಗೆ ಗೊಬ್ಬರವನ್ನು ತಿಪ್ಪೆಯಲ್ಲಿ ಕನಿಷ್ಟ 90 ದಿನಗಳು ಪರಿಷ್ಕರಿಸಿ ಉಪಯೋಗಿಸಿದಲ್ಲಿ ಕಳೆಯನ್ನು ನಿಯಂತ್ರಿಸಬಹುದು.

 4. ಆಗಾಗ್ಗೆ ಕಳೆಯನ್ನು ಗಮನಿಸಿ, ಟ್ರ್ಯಾಕ್ಟರ್ ಬಳಸಿ ರೊಟೊವೇಟ್ ಮಾಡುವುದು ಉತ್ತಮ, ಆದರೆ ಆಳಕ್ಕೆ ಬೇಡ.

8. ಅಡಿಕೆ ಬೆಳೆಗೆ ಸಾಮಾನ್ಯವಾಗಿ ಕಾಡುವ ರೋಗಗಳು ಯಾವುವು ?

ಕೊಳೆ, ಗೊನೆ ಒಣಗುವ, ಸುಳಿ ಕೊಳೆ, ನುಸಿ, ಸುಳಿ ಒಣಗುವ, ಅಣಬೆ ರೋಗ, ಬುಡ ವಿಸರ್ಜನೆ, ಹಿಡುಮುಂಡಿಗೆ, ಹಳದಿ ಎಲೆ ರೋಗ, ಹೀಗೆ ಅನೇಕ ರೋಗಗಳು ಅಡಿಕೆ ಬೆಳೆಯನ್ನು ಕಾಡುತ್ತವೆ. ಆದರೆ ಇವು ಪರಿಸರದಿಂದ ಪರಿಸರಕ್ಕೆ, ವಾತಾವರಣ ವ್ಯತ್ಯಾಸದಿಂದ ಈ ರೋಗಗಳು ಬರುತ್ತವೆ, ತೋಟಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿದಲ್ಲಿ, ರೋಗಗಳಿಂದ ಅಡಿಕೆ ಮರಗಳನ್ನು ಪಾರುಮಾಡಿ ಉತ್ತಮ ಇಳುವರಿಯನ್ನು ಪಡೆಯಬಹುದು.

9. ಅಡಿಕೆಗೆ ಕಾಡುವ ಸಾಮಾನ್ಯ ಕೀಟಗಳು ಯಾವುವು ?

ಇತರೆ ಬೆಳೆಗಳ ಹಾಗೆ ಅಡಿಕೆಗೂ ಅನೇಕ ಕೀಟಗಳ ಉಪಟಳವಿದೆ, ಅವುಗಳಲ್ಲಿ ಕೆಲವನ್ನು ಇಲ್ಲಿ ತಿಳಿಸಿದ್ದೇವೆ. ಎಳೆ ಎಲೆ ಕೀಟ (SPINDLE BUG), ಹೇನು (MITES), ಹೂಗೊಂಚಲು ಹುಳ (INFLORESENCE CATERPILLAR), ಗೊಣ್ಣೆಹುಳ (ROOT GRUB) ಹೀಗೆ ಇನ್ನೂ ಅನೇಕ ಕೀಟಗಳಿವೆ.

10. ಅಡಿಕೆಯಲ್ಲಿ ಯಾವ ಬೆಳೆಗಳನ್ನು ಅಂತರ ಬೆಳೆಗಳಾಗಿ ಬೆಳೆಯಬಹುದು ?

ಶುಂಠಿ, ಬಾಳೆ, ಅರಶಿನ, ಅಲವಿಗಡ್ಡೆ / ಕೆಸವಿನಗಡ್ಡೆ, ದವಣ, ಕಾಳು ಮೆಣಸು, ವೀಳ್ಯದೆಲೆ, ಅಶ್ವಗಂಧ, ಕೊಕೊ ಹೀಗೆ ಅನೇಕ ಬೆಳೆಗಳನ್ನು ಅಂತರ ಬೆಳೆಗಳಾಗಿ ಅಡಿಕೆಯಲ್ಲಿ ಯಶಸ್ವಿಯಾಗಿ ಬೆಳೆಯಬಹುದು.

11. ಅಡಿಕೆ ತೋಟಕ್ಕೆ ಬರುವ ಅಣಬೆ ರೋಗದ ನಿರ್ವಹಣೆ ಮಾಡುವುದು ಹೇಗೆ ?

ಸಾಮಾನ್ಯವಾಗಿ ಅತಿ ಕಡಿಮೆ ಕೊಟ್ಟಿಗೆ ಗೊಬ್ಬರ ಅಥವಾ ಬಹಳ ವರ್ಷಗಳು ಕೊಟ್ಟಿಗೆ ಗೊಬ್ಬರ ಬಳಸದ ಕಾರಣ, ಮಣ್ಣಿನಲ್ಲಿರುವ ಶಿಲೀಂದ್ರಗಳು ಅಡಿಕೆ ಅಥವಾ ಯಾವುದೇ ಮರದ ಆಸರೆ ಪಡೆದು ಬೆಳೆಯಲಾರಂಭಿಸುತ್ತವೆಯೆಂದು ತಿಳಿದು ಬಂದಿದೆ. ಈ ಕಾರಣದಿಂದಾಗಿ ಪ್ರತಿ ವರ್ಷ ತಪ್ಪದೆ ಕೊಟ್ಟಿಗೆ ಗೊಬ್ಬರ ಬಳಸುವುದು ಉತ್ತಮ ಅಭ್ಯಾಸ.

ಅಣಬೆ ರೋಗ ಬಂದ ಮರಗಳನ್ನು ಇದುವರೆವಿಗೂ ರಕ್ಷಿಸಿ ಮತ್ತೆ ಬೆಳೆಯುವಂತೆ ಮಾಡಿರುವ ಯಾವುದೇ ಉದಾಹರಣೆಗಳು ನಮ್ಮ ಮುಂದೆ ಕಂಡು ಬಂದಿಲ್ಲ. ಆದರೆ ಈ ಶಿಲೀಂದ್ರದಿಂದ ಸೋಂಕಿತ ಮರಗಳನ್ನು ಬೇರ್ಪಡಿಸಿ ಇತರ ಮರಗಳಿಗೆ ಹಬ್ಬದಂತೆ ರಕ್ಷಿಸಬಹುದಾಗಿದೆ.

 1. ಸೋಂಕಿತ ಮರಗಳಿಂದ ಸುಮಾರು 1.5 - 2.0 ಅಡಿಗಳ ದೂರದಲ್ಲಿ ಮರದ ಸುತ್ತಲೂ 1 ಅಡಿ ಆಳದ ಕಂದಕ ಮಾಡಿ, ಅದರಲ್ಲಿ ನೀರು ತುಂಬಿಸಿ ಆ ನೀರಿಗೆ 25ML, SOIL CLEAN / VEDIC UPACHAR ದ್ರಾವಣವನ್ನು ಸುರಿಯುವುದು, ಮತ್ತು ಇದೇ ವಿಧಾನವನ್ನು ವಾರಕ್ಕೊಮ್ಮೆಯಂತೆ 3 ವಾರಗಳು ಅನುಸರಿಸುವುದು.

 2. ಸೋಂಕು ಇಲ್ಲದ ಅಡಿಕೆ ಮರಗಳಿಗೆ ಪ್ರತಿ ಮರಕ್ಕೂ ಪಾತಿ ಮಾಡಿ ತುರ್ತಾಗಿ ಕೊಟ್ಟಿಗೆ ಗೊಬ್ಬರ ನೀಡಿ, ನೀರು ನೀಡಿ ಪ್ರತಿ ಗಿಡದ ಬುಡಕ್ಕೆ 5ML - SOIL CLEAN / VEDIC UPACHAR ದ್ರಾವಣವನ್ನು ನೀಡುವುದು, ಮತ್ತು ಈ ವಿಧಾನವನ್ನು ತಪ್ಪದೆ ಎರಡು ವಾರಗಳು ಅನುಸರಿಸುವುದು. SOIL CLEAN ಬಳಸುವ ಮುಂಚೆ, ಮರಕ್ಕೆ ನೀರು ಕೊಡಬೇಕು.

 3. SOIL CLEAN / VEDIC UPACHAR ದ್ರಾವಣವನ್ನು ಎರಡು ವಾರಗಳು ನೀಡಿದ ನಂತರ, ಮೂರನೇ ವಾರ ಸೋಂಕಿಲ್ಲದ ಅಡಿಕೆ ಮರಗಳಿಗೆ 25ML SOIL STAR ADVANCED ದ್ರಾವಣವನ್ನು ತಪ್ಪದೆ ಬಳಸುವುದು.

12. ಎಳೆ ಎಲೆ ರಸ ಹೀರುವ ಕೀಟ ಅಥವಾ ಸ್ಪಿಂಡ್ಲ ಬಗ್ಗ (SPINDLE BUG), ಕೀಟದಿಂದ ಹಾನಿಗೊಳಗಾದ ಅಡಿಕೆ ಗಿಡ ಅಥವಾ ಮರವನ್ನು ಗುರುತಿಸುವುದು ಹೇಗೆ ಮತ್ತು ಅದಕ್ಕೆ ಸಾವಯವದಲ್ಲಿ ಪರಿಹಾರವೇನು ?

ಎಳೆ ಎಲೆ ರಸ ಹೀರುವ ಅಥವಾ SPINDLE BUG ಎನ್ನುವ ಕೀಟದಿಂದ ಉಂಟಾಗುವ ಪರಿಣಾಮದ ಕೆಲ ಚಿತ್ರಗಳನ್ನು ಕೆಳಗೆ ಕೊಡಲಾಗಿದೆ ತಿಳಿಸಿ. ಸಾವಯವದಲ್ಲಿ ಇದಕ್ಕೆ ಪರಿಹಾರವಾಗಿ ಸಾಯಿಲ್ ಸ್ಟಾರ್ ಅಡ್ವಾನ್ಸಡ್ (SOIL STAR ADVANCED) / KRUSHI NIRMAN / SOIL REFRESH ದ್ರಾವಣವನ್ನು ನೀಡುವುದು. ಇದು ನೀಡುವುದರಿಂದ ಕೀಟಗಳನ್ನು ಹಿಮ್ಮೆಟ್ಟಿಸವ ಶಕ್ತಿ ಅಡಿಕೆ ಮರಕ್ಕೆ ಹೆಚ್ಚುತ್ತದೆ, ಆದುದರಿಂದ ದೊಡ್ಡ ಮರಗಳಿಗೆ ಯಾವುದೇ ರೀತಿ ಬಹಳ ಕಷ್ಟ ಪಟ್ಟು ಸಿಂಪಡಣೆ ಮಾಡುವ ಅವಶ್ಯವಿರುವುದಿಲ್ಲ. ಚಿಕ್ಕ ಗಿಡಗಳಾದರೆ, ನೇರವಾಗಿ "ಸಾಯಿಲ್ ಕ್ಲೀನ್" (SOIL CLEAN) ಎಂಬ ದ್ರಾವನವನ್ನು 2.5 ಮಿ ಲಿ. ಒಂದು ಲೀ. ನೀರಿಗೆ ಬೆರೆಸಿ ಸಿಂಪಡಿಸುವುದು ಮತ್ತು ಇದನ್ನು ಮತ್ತೊಮ್ಮೆ ಒಂದು ವಾರದ ನಂತರ ಸಿಂಪಡಿಸುವುದು.

13. ಅಡಿಕೆ ಹೂಗೊಂಚಲು ಹುಳ (Inflorescence caterpillar) ಬಾಧಿತ ಅಡಿಕೆ ಮರವನ್ನು ಗುರುತಿಸುವುದು ಹೇಗೆ ಮತ್ತು ಸಾವಯವ ಪರಿಹಾರಗಳೇನು ?


ಈ ಚಿತ್ರದಲ್ಲಿ ತೋರಿಸಿದ ಹಾಗೆ ಹೂ ಮತ್ತು ಎಳೆ ಕಾಯಿ ಇರುವ ಗೊನೆ ಕಾಣಿಸುತ್ತದೆ ಮತ್ತು ಅಂಟು ಸುರಿಯಬಹುದು. ರೈತರು ಇಂತಹ ಲಕ್ಷಣಗಳು ಕಂಡಾಗ ಇದೇ ಹುಳದ ಪರಿಣಾವೆಂದು ತಿಳಿಯ ಬೇಕು. ಈ ಸಮಸ್ಯೆಗೆ ಅನೇಕ ಪರಿಹಾರಗಳಿವೆ.

 1. ಕೀಟ ನಾಶಕಗಳನ್ನು ಬಳಸದೆ, ಪರಭಕ್ಷಕ ಕೀಟಗಳನ್ನು (ಗುಲಗಳಜಿ ಹುಳ) ಸಂರಕ್ಷಿಸಿದಲ್ಲಿ ಇವನ್ನು ಹತೋಟಿಯಲ್ಲಿಡಬಹುದು.

 2. ಈ ಕೀಟಗಳು ಬರುವ ಸುಮಾರು ಒಂದು ತಿಂಗಳ ಮುಂಚೆ, ಅಂದರೆ ಅಡಿಕೆ ಗೊನೆ ಹಾಕುವ ಮುಂಚೆ, ದ್ವಿದಳ ದಾನ್ಯಗಳು, ಸಾಸುವೆ ಈ ತರಹದ ಬೀಜಗಳನ್ನು ಚಲ್ಲಿರುವುದು. ಈ ಕಾರಣ ದಿಂದ ಕೀಟಗಳನ್ನು ವಿಕೇಂದ್ರೀಕರಿಸಿ ಗೊನೆಗಳನ್ನು ರಕ್ಷಿಸುವುದು.

 3. SOIL STAR / KRUSHI NIRMAN / SOIL REFRESH ದ್ರಾವಣವನ್ನು ನಿರಂತರವಾಗಿ ಉಪಯೋಗಿಸುವುದರಿಂದ ಈ ಕೀಟಗಳನ್ನು ಪರಿಣಾಮಕಾರಿಯಾಗಿ ಹತೋಟಿಗೆ ತರಬಹುದು.

14. ಗೋಣ್ಣೆ ಹುಳ / ಬೇರು ಹುಳ ದಿಂದ ಬಾಧಿತ ಅಡಿಕೆ ಮರಗಳನ್ನು ಗುರುತಿಸುವುದು ಹೇಗೆ ಮತ್ತು ಸಮಸ್ಯೆಗೆ ಸಾವಯವ ಪರಿಹಾರಗಳೇನು ?

ಈ ಕೆಳಗೆ ನೀಡಿರುವ ಚಿತ್ರಗಳು, ಗೊಣ್ಣೆ ಹುಳದಿಂದ ಬಾಧಿತ ಅಡಿಕೆ ಮರಗಳನ್ನು ತೋರಿಸುತ್ತವೆ. ಇವುಗಳ ಉಪಟಳದಿಂದ ಕೇವಲ ಇಳುವರಿಯಲ್ಲದೆ ಮರಗಳೇ ಕಳೆದು ಕೊಳ್ಳವ ಸಂಭವವಿರುತ್ತದೆ. ಈ ಸಮಸ್ಯೆಯು ಸಾಮಾನ್ಯವಾಗಿ ಮೇ ತಿಂಗಳಿನಿಂದ ಅಕ್ಟೋಬರ್ ತಿಂಗಳಿನವರೆವಿಗೆ ಇರುತ್ತದೆ ಹಾಗು ಮರಳು ಮಿಶ್ರಿತ ಭೂಮಿಯಲ್ಲಿ ಹೆಚ್ಚು. ಈ ಸಮಸ್ಯೆಗೆ ಮೂಲ ಕಾರಣ ಸರಿಯಾದ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ನೀಡದಿರುವುದು, ಅಥವಾ ಕೊಟ್ಟಿಗೆ ಗೊಬ್ಬರವನ್ನೇ ಕೊಡದಿರುವುದು. ಈ ಸಮಸ್ಯಗೆ ಹಲವು ಸಾವಯವ ಪರಿಹಾರೋಪಾಯಗಳನ್ನು ನೀಡಲಾಗಿದೆ.

 1. ಸರಿಯಾದ ಪ್ರಮಾಣದಲ್ಲಿ ಕೊಟ್ಟಗೆ ಗೊಬ್ಬರವನ್ನು ತಪ್ಪದೆ ಬಳಸುವುದು.

 2. ತಪ್ಪದೆ ಪ್ರತಿ ವರ್ಷ ಮಲ್ಚಿಂಗ್ ಪದ್ಧತಿಯನ್ನು ಅನುಸರಿಸುವುದು.

 3. ನಾಟಿ (ಜವಾರಿ) ದನಗಳ ಸಗಣಿ ಜೊತೆಗೆ ಎಳೆ ಜೋಳದ ದಂಟುಗಳ ಮಿಶ್ರಣವನ್ನು ಕುಡಿಕೆಗಳಲ್ಲಿರಿಸಿ, ಪ್ರತಿದಿನ ಬೆಳಗ್ಗೆ ಆ ಕುಡಿಕೆಗೆ ಬಂದಿರುವ ಹುಳಗಳನ್ನು ನಾಶಪಡಿಸುವುದು.

 4. ರಾತ್ರಿಯಲ್ಲಿ ಟಾರ್ಚ್ ಬಳಸಿ, ಗೊಣ್ಣೆ ಹುಳದ ಪತಂಗಗಳನ್ನು ಹುಡುಕಿ ಕೊಲ್ಲುವುದು (ಈ ಪದ್ಧತಿ ಹೆಚ್ಚಿನ ಪರಿಣಾಮಕಾರಿಯಾಗಿರುವುದಿಲ್ಲ)

 5. SOIL CLEAN ದ್ರಾವನವನ್ನು 5 ML ಪ್ರತಿ ಲೀ. ನೀರಿಗೆ ಮಿಶ್ರಣ ಮಾಡಿ ಸುಮಾರು 5 ಲೀ. ಒಂದು ಎಕರೆಗೆ ಬಳಸುವುದು.

15. ಬಿಳಿ ಹೇನು


16. ಕೆಂಪು ಹೇನು


17. ಅಡಿಕೆ ಗಿಡದ ಬುಡದಲ್ಲಿ ಅಂಟು ಸೋರುತ್ತಿದೆ ಕಾರಣವೇನು ?


18. ಅಡಿಕೆ ಗಿಡದ ಬುಡದಲ್ಲಿ ಅಂಟು ಸೋರುವುದು ಅಪಾಯವೇ ? ಹಾಗಿದ್ದರೆ ಅದನ್ನು ನಿರ್ವಹಿಸುವುದು ಹೇಗೆ ?


19.


20.